ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೂ ಪತ್ತೆಯಾದ ನಗದು ಮೊತ್ತ 500 ಕೋಟಿ ರೂಪಾಯಿ ದಾಟಿದೆ. ಇನ್ನೂ ಐಟಿ ಅಧಿಕಾರಿಗಳು ನಗದು ಎಣಿಕೆಯನ್ನು ಮುಂದುವರಿಸಿದ್ದಾರೆ. 40ಕ್ಕೂ ಹೆಚ್ಚು ಅಧಿಕಾರಿಗಳು 8ಕ್ಕೂ ಹೆಚ್ಚು ನೋಟು ಎಣಿಕೆ ಯಂತ್ರಗಳನ್ನು ಇಟ್ಟುಕೊಂಡು ನಗದು ಹಣವನ್ನು ಎಣಿಸುತ್ತಿದ್ದಾರೆ.