ಲಕ್ನೋ: 14 ದಿನಗಳ ಪೂಜೆ ಮಾಡಿಸಿ ಕೊನೆಗೆ ಅರ್ಚಕರಿಗೇ ಪಂಗನಾಮ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೂಜೆ ಮಾಡಿಸಿದ ವಂಚಕ ದಂಪತಿ ಅರ್ಚಕರಿಗೆ ನಕಲಿ ನೋಟಿನ ದಕ್ಷಿಣೆ ನೀಡಿ ವಂಚಿಸಿದ್ದಾರೆ.14 ದಿನ ಪೂಜೆ ಮಾಡಿಸಿದರೆ ನಿಧಿ ಸಿಗುತ್ತದೆ ಎಂದು ಸುಮಾರು 60 ಅರ್ಚಕರನ್ನು ಕರೆಸಿ ವಿವಿಧ ಪೂಜೆ ಮಾಡಿಸಿದ ದಂಪತಿ ಕೊನೆಯಲ್ಲಿ ದಕ್ಷಿಣೆ ನೀಡುವಾಗ ನಕಲಿ ನೋಟು ನೀಡಿದ್ದಾರೆ. ಪೂಜೆ ಎಲ್ಲಾ ಮುಗಿದ ಮೇಲೆ ಕವರ್ ಒಂದನ್ನು ನೀಡಿ