ಕೆಲ ಕುಡುಕರ ಗುಂಪೊಂದು ರಾತ್ರಿ ಸಮಯದಲ್ಲಿ 25 ವರ್ಷದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ, ಮಹಿಳೆ ತನ್ನ ಪತಿ ಹಾಗೂ 10 ತಿಂಗಳ ಮಗುವಿನೊಂದಿಗೆ ಚಲಿಸುತ್ತಿರುವ ರೈಲಿನಿಂದ ಹೊರಗೆ ಹಾರಿದ ಭೀಕರ ಘಟನೆ ವರದಿಯಾಗಿದೆ. ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಗಳ ಪ್ರಕಾರ, 32 ವರ್ಷ ವಯಸ್ಸಿನ ಅಶಾಬಲ್ ತಮ್ಮ ಪತ್ನಿ ಮತ್ತು 10 ತಿಂಗಳ ಮಗುವಿನೊಂದಿಗೆ ನವದೆಹಲಿಯ ಗಾಜಿಯಾಬಾದ್ನಿಂದ ಪಶ್ಚಿಮ ಬಂಗಾಳದ ಅಲಿಪುರ್ದುವರ್ಗೆ