ಪುಲಕೇಶಿನಗರದಲ್ಲಿ ಕಳೆದ ಏಪ್ರೀಲ್ 21 ರಂದು ನಡೆದಿದ್ದ ದಂಪತಿಗಳ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸಾಲ ನೀಡಲು ನಿರಾಕರಿಸಿದ್ದೇ ಈ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಸ್ ರಸ್ತೆಯ ನಿವಾಸಿಗಳಾದ ಪರ್ವತರಾಜ್ (61) ಹಾಗೂ ಚಂದ್ರಕಲಾ (55) ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಚಂದ್ರಕಲಾ ಅವರ ಕತ್ತು ಕೊಯ್ದಿದ್ದರೆ, ಪರ್ವತರಾಜ್ ಅವರಿಗೆ 25 ಬಾರಿ ಇರಿದು ಕೊಲ್ಲಲಾಗಿತ್ತು. ಬಂಧಿತ ಆರೋಪಿಯನ್ನು