ಡಿಎನ್ಎ ಟೆಸ್ಟ್ ಫಲಿತಾಂಶ ನೋಡಿ ಆರೋಪಿಯ ಖುಲಾಸೆಗೊಳಿಸಿದ ಕೋರ್ಟ್

ಲಕ್ನೋ| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (09:22 IST)
ಲಕ್ನೋ: ಯುವತಿಯ ಮೇಲೆ ಮಾನಭಂಗ ಮಾಡಿದ ಆರೋಪ ಎದುರಿಸುತ್ತಿದ್ದ 28 ವರ್ಷದ ಯುವಕನ ಡಿಎನ್ಎ ಪರೀಕ್ಷೆ ವರದಿ ನೋಡಿದ ಬಳಿಕ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿದ ಘಟನೆ ಆಲಿಘಡದಲ್ಲಿ ನಡೆದಿದೆ.

 
ಎರಡು ವರ್ಷಗಳ ಹಿಂದೆ ಯುವಕ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ ಪರಿಣಾಮ ಅವಳು ಗರ್ಭಿಣಿಯಾಗಿದ್ದಾಳೆ ಎಂದು 13 ವರ್ಷದ ಅಪ್ರಾಪ್ತ ಯುವತಿಯ ತಂದೆ ದೂರು ನೀಡಿದ್ದರು. ಅದರಂತೆ ಆಗಲೇ ಆತನನ್ನು ಬಂಧಿಸಲಾಗಿತ್ತು.
 
ಕಳೆದ ವರ್ಷ ಜುಲೈನಲ್ಲಿ ಯುವತಿ ಮತ್ತು ಆಕೆಯ ಮಗುವಿನ ಡಿಎನ್ಎ ಪರೀಕ್ಷೆ ನಡೆಸಲು ಆರೋಪಿ ಪರ ವಕೀಲರು ಕೋರ್ಟ್ ನಿಂದ ಅನುಮತಿ ಪಡೆದಿದ್ದರು. ಅದರಂತೆ ಡಿಎನ್ಎ ಪರೀಕ್ಷೆ ನಡೆಸಿದಾಗ ಆರೋಪಿಯು ಯುವತಿಯ ಮಗುವಿನ ತಂದೆಯಲ್ಲ ಎನ್ನುವುದು ತಿಳಿದುಬಂತು. ವರದಿ ಪರಿಶೀಲಿಸಿದ ಕೋರ್ಟ್ ಈಗ ಆರೋಪಿ ಸ್ಥಾನದಲ್ಲಿದ್ದ ಯುವಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :