ಹೊಸದಿಲ್ಲಿ,ಸೆ.19 : ಯಾವುದೇ ವ್ಯಕ್ತಿಯು ಆರೋಪಿಯೆಂದು ಹೆಸರಿಸಲ್ಪಟ್ಟಿರದಿದ್ದಾಗ,ಆದರೆ ಆತ ಅಪರಾಧವೆಸಗಿದ್ದಾನೆ ಎಂದು ಕಂಡು ಬರುತ್ತಿದ್ದರೆ ಆತನ ವಿರುದ್ಧ ಬಲವಾದ ಮತ್ತು ದೃಢವಾದ ಸಾಕ್ಷವಿದ್ದರೆ ಮಾತ್ರ ಆತನ ವಿರುದ್ಧ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯಗಳು ಬಳಸಬಹುದೇ ಹೊರತು ಬೇಕಾಬಿಟ್ಟಿಯಾಗಿ ಆತನನ್ನು ತಮ್ಮೆದುರು ಕರೆಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.