ರೂಪಾಂತರಿ ಕೊರೋನಾ ವಿರುದ್ಧವೂ ಕೊವ್ಯಾಕ್ಸಿನ್ ಪರಿಣಾಮಕಾರಿ

ನವದೆಹಲಿ| Krishnaveni K| Last Modified ಮಂಗಳವಾರ, 4 ಮೇ 2021 (09:31 IST)
ನವದೆಹಲಿ: ಭಾರತದಲ್ಲಿ ತಯಾರಾಗಿರುವ ಕೊವ್ಯಾಕ್ಸಿನ್ ಲಸಿಕೆ ಬ್ರಿಟನ್, ಬ್ರೆಜಿಲ್ ಸೇರಿದಂತೆ ವಿದೇಶದಿಂದ ರೂಪಾಂತರಗೊಂಡು ಬಂದಿರುವ ಕೊರೋನಾ ವಿರುದ್ಧವೂ ಪರಿಣಾಮಕಾರಿಯೇ? ಈ ಪ್ರಶ್ನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಉತ್ತರ ನೀಡಿದೆ.

 

ವಿದೇಶೀ ತಳಿಗಳ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಐಸಿಎಂಆರ್ ನಡೆಸಿದ ನೂತನ ಅಧ್ಯಯನದಿಂದ ತಿಳಿದುಬಂದಿದೆ.
 
ಬ್ರಿಟನ್ ರೂಪಾಂತರಿ ಕೊರೋನಾ, ಭಾರತದ ಡಬಲ್ ಮ್ಯುಟೆಂಟ್ ಕೊರೋನಾ ವಿರುದ್ಧವೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಐಸಿಎಂಆರ್ ಹೇಳಿದೆ. ಹೀಗಾಗಿ ರೂಪಾಂತರಿ ಕೊರೋನಾ ಬಗ್ಗೆ ಇದ್ದ ಜನರ ಅನುಮಾನಗಳಿಗೆ ಉತ್ತರ ನಿಡಿದೆ.
ಇದರಲ್ಲಿ ಇನ್ನಷ್ಟು ಓದಿ :