ನವದೆಹಲಿ: ಕೊರೋನಾ ಹರಡುವಿಕೆ ತಡೆಯಲು ಸಿಂಗಾಪುರ್ ನಲ್ಲಿ ಮತ್ತೆ ಒಂದು ತಿಂಗಳ ಲಾಕ್ ಡೌನ್ ಮಾಡಲು ಅಲ್ಲಿನ ಪ್ರಧಾನಿ ಘೋಷಣೆ ಮಾಡಿದ್ದಾರೆ. ಇದೀಗ ಭಾರತದಲ್ಲೂ ಇದೇ ಗತಿಯಾಗಬಹುದೇ ಎಂಬ ಆತಂಕ ಜನರಿಗೆ ಎದುರಾಗಿದೆ.ಒಂದು ವಾರ ಲಾಕ್ ಡೌನ್ ಹಿಂಪಡೆದಿದ್ದಾಗ ಒಂದು ಸಾವಿರ ಮಂದಿಗೆ ಹೊಸದಾಗಿ ಸೋಂಕು ತಗುಲಿತ್ತು. ಸೋಂಕಿತರ ಸಂಖ್ಯೆ ಭಾರೀ ಹೆಚ್ಚಳವಾದ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿಸಲು ಸಿಂಗಾಪುರ ಸರ್ಕಾರ ನಿರ್ಧರಿಸಿದೆ.ಇದೀಗ ಭಾರತದ ಸ್ಥಿತಿಯೂ ಇದಕ್ಕಿಂತ ಭಿನ್ನಾವೇನೂ ಅಲ್ಲ.