ಲಕ್ನೋ: ನದಿಗಳಿಂದಲೂ ಕೊರೋನಾ ಹರಡುವ ಭಯ ಈಗ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿ ತೀರದ ನಿವಾಸಿಗಳಿಗೆ ಶುರುವಾಗಿದೆ.ಇದಕ್ಕೆ ಕಾರಣ ಇವೆರಡೂ ರಾಜ್ಯಗಳನ್ನು ಸಂಪರ್ಕಿಸುವ ಗಂಗಾ ನದಿ ತಟದಲ್ಲಿ ಕೊರೋನಾ ರೋಗಿಗಳ ಮೃತದೇಹಗಳು ತೇಲಿಕೊಂಡು ಬರುತ್ತಿವೆ. ಈ ಮೃತದೇಹಗಳಿಂದ ಕೊರೋನಾ ಹರಡಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.ಆದರೆ ಕೆಲವು ತಜ್ಞರ ಪ್ರಕಾರ ಕೊಳೆತ ಶವಗಳಿಂದ ಕೊರೋನಾ ಹರಡುವ ಸಾಧ್ಯತೆ ಕಡಿಮೆ. ಹಾಗಿದ್ದರೂ ಸ್ಥಳೀಯರು ಈಗ ಈ ನದಿ