ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷದ ಮಾಜಿ ಸಂಸದ ಜೋಯ್ಸ್ ಜಾರ್ಜ್ ನೀಡಿದ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ.ಚುನಾವಣಾ ಪ್ರಚಾರ ವೇಳೆ ಜೋಯ್ಸ್ ‘ಮಹಿಳೆಯರೇ ರಾಹುಲ್ ಗಾಂಧಿ ಬಳಿ ಹೋಗುವ ಮೊದಲು ಹುಷಾರ್. ಅವರಿಗಿನ್ನೂ ಮದುವೆಯಾಗಿಲ್ಲ’ ಎಂದು ಕಿಚಾಯಿಸಿದ್ದರು. ಕೆಲವು ದಿನಗಳ ಹಿಂದೆ ರಾಹುಲ್ ಕೊಚ್ಚಿಯ ಕಾಲೇಜೊಂದರಲ್ಲಿ ಮಹಿಳೆಯರಿಗೆ ಒತ್ತಡ ತಡೆದುಕೊಳ್ಳುವ ಶಕ್ತಿ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದ್ದರು. ಇದನ್ನು ಉಲ್ಲೇಖಿಸಿ