ಸಿಆರ್`ಪಿಎಫ್ ಯೂನಿಟ್ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ನಡೆದಿದೆ. ಮೊದಲಿಗೆ ಗ್ರೆನೇಡ್ ದಾಳಿ ನಡೆಸಿದ ಉಗ್ರರು ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡವರ ಪೈಕಿ 7 ಮಂದಿ ಸಿಆರ್`ಪಿಎಫ್ ಜವಾನರು ಸೇರಿದ್ದಾರೆ. ಜಮ್ಮುವಿನ ಸಚಿವ ನಯೀಮ್ ಅಖ್ತರ್ ಯೋಜನೆಯೊಂದರ ಉದ್ಘಾಟನೆಗೆ ಟ್ರಾಲ್`ಗೆ ತೆರಳಿದ್ದ ಸಂದರ್ಭವೇ ಈ ದಾಳಿ