ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ಬಿಜೆಪಿ ಪಕ್ಷದ ಉಸ್ತುವಾರಿ ಆಗಿರುವ ಸಿಟಿ ರವಿ ಅವರನ್ನು ಕೂಡಲೇ ಮುಂಬೈಗೆ ಬರುವಂತೆ ಸೂಚಿಸಲಾಗಿದ್ದು, ನಾಳೆ ಹೊಸ ಸರಕಾರ ರಚನೆಯ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದು, ಎರಡೂವರೆ ವರ್ಷದ ಮಹಾ ಆಘಾಡಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವ