Widgets Magazine

ರಸ್ತೆಯಲ್ಲಿ ಮುಸ್ಲಿಂ ಯುವತಿಯರ ಡ್ಯಾನ್ಸ್ ವೈರಲ್- ಆಕ್ರೋಶ

ತಿರುವನಂತಪುರ| Hanumanthu.P| Last Modified ಸೋಮವಾರ, 4 ಡಿಸೆಂಬರ್ 2017 (18:32 IST)
ರಸ್ತೆಯಲ್ಲಿ ಮುಸ್ಲಿಂ ಯುವತಿಯರು ಡ್ಯಾನ್ಸ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಸಾಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಮಲಪ್ಪುರಂನಲ್ಲಿ ಏಡ್ಸ್ ಜಾಗೃತಿ ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲಪ್ಪುರಂನ ಮುಖ್ಯ ವೃತ್ತದಲ್ಲಿ ಮುಸ್ಲಿಂ ಯುವತಿಯರು ಡ್ಯಾನ್ಸ್ ಮಾಡಿದ್ದರು. ಬುರ್ಖಾ ಮತ್ತು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಂತ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ ಹಲವರು ಯುವತಿಯರ ಡ್ಯಾನ್ಸ್ ಬೆಂಬಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :