ಕೋಲ್ಕೊತ್ತಾ: ತಂದೆಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ ಮಗಳು ಬಳಿಕ ಆತನ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆ ಮಾಡಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.56 ವರ್ಷದ ವ್ಯಕ್ತಿ ಹತ್ಯೆಗೀಡಾದವರು. 22 ವರ್ಷದ ವಿಚ್ಛೇದಿತ ಮಗಳು ಈ ಕೃತ್ಯವೆಸಗಿದ್ದಾಳೆ. ತನ್ನ ತಂದೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಅದಕ್ಕೇ ಈ ಕೆಲಸ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾಳೆ.ಪಾನಪ್ರಿಯನಾಗಿದ್ದ ತಂದೆಯನ್ನು ಸ್ನೇಹಿತರ ಪಾರ್ಟಿಯಿದೆ ಎಂದು ಸುಳ್ಳು ಹೇಳಿ ಹೊರಗೆ ಕರೆದೊಯ್ದಿದ್ದ ಆರೋಪಿ