ರೈಲಿನಲ್ಲಿ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ ಎಂದು ಸಂಸತ್ತಿಗೆ ಆಡಿಟರ್ ವರದಿ ಸಲ್ಲಿಸಿ 2 ದಿನ ಕಳೆಯುವಷ್ಟರಲ್ಲಿ ರೈಲ್ವೆ ಆಹಾರದ ನಿಜ ಬಣ್ಣ ಬಯಲಾಗಿದೆ. ಉತ್ತರಪ್ರದೇಶದ ಪೂರ್ವ ಎಕ್ಸ್`ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ ೂಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಜಾರ್ಖಂಡ್`ನಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಯಾತ್ರಿಕರು ಆರ್ಡರ್ ಮಾಡಿದ್ದ ವೆಜ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಪಾಟ್ನಾ ಬಳಿ ಸಂಚರಿಸುತ್ತಿದ್ದಾಗ ಓರ್ವ ಪ್ರಯಾಣಿಕ ಅಸ್ವಸ್ಥನಾಗಿದ್ದಾನೆ. ಬಳಿಕ ಪ್ರಯಾಣಿಕರೆಲ್ಲರೂ ಊಟವನ್ನ