ದೆಹಲಿ-ಮೀರತ್ ಎಕ್ಸ್ ಪ್ರೇಸ್ ಹೈವೇಯಲ್ಲಿ ಭೀಕರ ಅಪಘಾತ : ಐವರು ಸ್ಥಳದಲ್ಲೇ ಸಾವು

ನವದೆಹಲಿ| Ramya kosira| Last Modified ಮಂಗಳವಾರ, 7 ಸೆಪ್ಟಂಬರ್ 2021 (10:26 IST)
ನವದೆಹಲಿ : ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಐದು ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮಸೂರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಒಟ್ಟು ಏಳು ಪ್ರಯಾಣಿಕರಿರುವ ಕಾರು ಎಕ್ಸ್ ಪ್ರೆಸ್ ವೇನಲ್ಲಿ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಏಳು ಪ್ರಯಾಣಿಕರಲ್ಲಿ ಎರಡು ಕುಟುಂಬಗಳ ಸದಸ್ಯರು ಸೇರಿದ್ದಾರೆ ದಂಪತಿ ಮತ್ತು ಮೂವರು ಮಕ್ಕಳ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಉತ್ತರಾಖಂಡದ ಹರಿದ್ವಾರದಿಂದ ಗಾಜಿಯಾಬಾದ್ ಗೆ ಹಿಂದಿರುಗುತ್ತಿದ್ದಾಗ ಸಂಭವಿಸಿದೆ. ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯನ್ನು ಈ ವರ್ಷದ ಏಪ್ರಿಲ್ ನಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ಇನ್ನೂ ಔಪಚಾರಿಕವಾಗಿ ಉದ್ಘಾಟಿಸಲಾಗಿಲ್ಲ. ಇದು ಗಾಜಿಯಾಬಾದ್ ನ ದಾಸ್ನಾ ಮೂಲಕ ಉತ್ತರ ಪ್ರದೇಶದ ಮೀರತ್ ನೊಂದಿಗೆ ದೆಹಲಿಯನ್ನು ಸಂಪರ್ಕಿಸುತ್ತದೆ.>  >


ಇದರಲ್ಲಿ ಇನ್ನಷ್ಟು ಓದಿ :