ಮುಂಬೈ : ಮ್ಯಾಗಿಯಲ್ಲಿದ್ದ ಇಲಿ ಪಾಷಾಣ ಬೆರೆಸಿದ ಟೊಮೆಟೊವನ್ನು ತಿಂದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.ರೇಖಾ ನಿಶಾದ್(27) ಮೃತ ಮಹಿಳೆ. ಮುಂಬೈನ ಮಲಾಡ್ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲು ರೇಖಾ ಟೊಮೆಟೊಗೆ ಇಲಿ ಪಾಷಾಣವನ್ನು ಬೆರೆಸಿದ್ದಳು. ಆದರೆ ಮ್ಯಾಗಿ ತಯಾರಿಸುತ್ತಿದ್ದಾಗ ಟಿವಿ ನೋಡುತ್ತಾ ಆಕಸ್ಮಿಕವಾಗಿ ಇಲಿ ಪಾಷಾಣ ಬೆರೆಸಿದ್ದ ಟೊಮೆಟೊವನ್ನು ಹಾಕಿದ್ದಾಳೆ. ನಂತರ ಮ್ಯಾಗಿಯನ್ನು ತಿಂದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲು