ಮಿತ್ರಪಕ್ಷವಾದ ಶಿವಸೇನೆಯ ಟೀಕೆಗಳಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಿಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಶಿವಸೇನೆ ನಿರ್ಧರಿಸಲಿ ಎಂದು ಗುಡುಗಿದ್ದಾರೆ. ಶಿವಸೇನೆ ನಮ್ಮ ಎಲ್ಲಾ ನಿರ್ಧಾರಗಳನ್ನು ವಿರೋಧಿಸುತ್ತದೆ. ಮಿತ್ರಪಕ್ಷವಾಗಿ ಸಲಹೆಗಳನ್ನು ಕೊಡಬಹುದು. ಒಂದೇ ಬಾರಿಗೆ ಅಧಿಕಾರರೂಢ ಪಕ್ಷವಾಗಿ ಮತ್ತೊಂದು ಕಡೆ ವಿಪಕ್ಷವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರಾಗಲಿ, ಉದ್ಭವ ಠಾಕ್ರೆಯವರಾಗಲಿ ಸರಕಾರದ ಪ್ರತಿಯೊಂದು ನಿರ್ಧಾರವನ್ನು ಋಣಾತ್ಮಕವಾಗಿ ಪರಿಗಣಿಸಿಲ್ಲ.