ರಾಜೀನಾಮೆ ನೀಡಲು ನಿರಾಕರಿಸಿದ ಮಹಾರಾಷ್ಟ್ರ ಸಚಿವ ಏಕನಾಥ್ ಖಾಡ್ಸೆ

ಮುಂಬೈ| Rajesh patil| Last Modified ಗುರುವಾರ, 2 ಜೂನ್ 2016 (18:46 IST)
ಭೂಗತ ದೊರೆ ದಾವೂದ್ ಇಬ್ರಾಹಿಂ ಫೋನ್‌ ಕರೆಗಳು ಮತ್ತು ಅಕ್ರಮ ಭೂ ಕಬಳಿಕೆ ಭೂ ಹಗರಣದಲ್ಲಿ ಸಿಲುಕಿರುವ ಏಕನಾಥ್ ಖಾಡ್ಸೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೋರಿದರು ಅವರ ಕೋರಿಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಖಾಡ್ಸೆ ವಿಷಯಕ್ಕೆ ಸಂಬಂಧಿಸಿದಂತೆ ಫಡ್ನವೀಸ್, ನಾಳೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ವರದಿಗಳ ಪ್ರಕಾರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಖಾಡ್ಸೆ

ಹಗರಣ ಕುರಿತಂತೆ ವರದಿ ನೀಡುವಂತೆ ಸಿಎಂ ಫಡ್ನವೀಸ್‌ಗೆ ಆದೇಶ ನೀಡಿದ್ದಾರೆ.


ಮಹಾರಾಷ್ಟ್ರದ ಬಿಜೆಪಿ ಹೊಣೆ ಹೊತ್ತಿರುವ ಸರೋಜ್ ಪಾಂಡೆ, ಮೂರು ದಿನಗಳ ಹಿಂದೆ ಖಾಡ್ಸೆಯವರನ್ನು ಭೇಟಿ ಮಾಡಿ ಹಗರಣಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವಂತೆ ಕೋರಿದ್ದರು. ತದನಂತರ ಮೋದಿ, ಶಾ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ವಿರೋಧದ ಮಧ್ಯೆಯೂ ಖಾಡ್ಸೆಯವರ ಬಗ್ಗೆ ಆರೆಸ್ಸೆಸ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಆರೆಸ್ಸೆಸ್ ನಾಯಕರು ತಿಳಿಸಿದ್ದಾರೆ.


ಏಕನಾಥ್ ಖಾಡ್ಸೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಲ್ಲಿ ದಂದ್ವ ನಿಲುವು ಸರಿಯಲ್ಲ ಎಂದು ಆರೆಸ್ಸೆಸ್ ಮುಖಂಡ ರಾಕೇಶ್ ಸಿನ್ಹಾ ಖಡಕ್ ಎಚ್ಚರಿಕೆ ನೀಡಿದ್ದಾರೆ.ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :