ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರು ಕಳ್ಳತನವಾಗಿದ್ದು ಪೊಲೀಸ್ ಠಾಣೆದೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಹುದ್ದೆ ಅಲಂಕರಿಸುವ ಮುನ್ನ ಆರ್.ವ್ಯಾಗನ್ ಕಾರು ಬಳಸುತ್ತಿದ್ದರು. ಇದೀಗ ಕಾರು ಕಳ್ಳತನವಾಗಿದ್ದರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರೊಂದಿಗೆ ಚಳುವಳಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಕೇಜ್ರಿವಾಲ್, ವ್ಯಾಗನ್ ಕಾರು ಉಪಯೋಗಿಸುತ್ತಿದ್ದರು. ನಂತರ ಸಿಎಂ ಆದ ಬಳಿಕ ಸರಕಾರಿ ಕಾರು ಬಳಸುತ್ತಿದ್ದಾರೆ