ಹೆಂಡತಿಯ ಬೇಡಿಕೆ ಪೂರೈಸಲು ಸರಗಳ್ಳನಾದ ಡೆಲಿವರಿ ಬಾಯ್

ಪುಣೆ| Krishnaveni K| Last Modified ಮಂಗಳವಾರ, 13 ಜುಲೈ 2021 (10:55 IST)
ಪುಣೆ: ಹೊಸದಾಗಿ ಮದುವೆಯಾದ ತನ್ನ ಹೆಂಡತಿಗೆ ವೈಭವೋಪೇತ ಜೀವನ ಕೊಡಲು ಇಲ್ಲೊಬ್ಬ ಫುಡ್ ಡೆಲಿವರಿ ಬಾಯ್ ಸರಗಳ್ಳತನಕ್ಕಿಳಿದ ಘಟನೆ ಪುಣೆಯಲ್ಲಿ ನಡೆದಿದೆ.

 
20 ವರ್ಷದ ಯುವಕನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ವೈಭವೋಪೇತ ಜೀವನ ನಡೆಸಲು ಸಂಬಳ ಸಾಲುತ್ತಿರಲಿಲ್ಲ. ಹೀಗಾಗಿ ಸರಗಳ್ಳತನಕ್ಕಿಳಿದಿದ್ದ.
 
ಇದುವರೆಗೆ ಸುಮಾರು ಆರೇಳು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಗಸ್ತು ಪಡೆ ಬಂದಿಸಿ ವಿಚಾರಿಸಿದಾಗ ಕೃತ್ಯ ಬಯಲಾಗಿದೆ. ಈ ಕೃತ್ಯವೆಸಗಲು ಆನ್ ಲೈನ್ ನಲ್ಲಿ ಹಲವು ವಿಡಿಯೋ ನೋಡಿ ತರಬೇತಿ ಪಡೆದಿದ್ದಾಗ ಹೇಳಿಕೊಂಡಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :