ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್ಗಳಲ್ಲಿ 1 ಪ್ರತಿಶತ ಮಾದರಿಗಳಲ್ಲಿ AY.4 ತಳಿ ಕಂಡು ಬಂದಿದೆ. ಜುಲೈನಲ್ಲಿ 2 ಪ್ರತಿಶತ ಹಾಗೂ ಆಗಸ್ಟ್ ತಿಂಗಳ ವೇಳೆಗೆ ಈ ಹೊಸ ತಳಿಯ ಪ್ರಮಾಣವು 44 ಪ್ರತಿಶತಕ್ಕೆ ಏರಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ 308 ಸ್ಯಾಂಪಲ್ಗಳ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ 137 ಸ್ಯಾಂಪಲ್ಗಳು