ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ ಸಂಘಟನೆ ಮುಖ್ಯಸ್ಥ ಗುರ್ಮೀತ್ ಬಾಬಾನ ವಿರುದ್ಧದ ಮತ್ತೆರಡು ಪ್ರಕರಣಗಳು ಇಂದು ವಿಚಾರಣೆ ನಡೆಯಲಿದೆ. ಎರಡು ಕೊಲೆ ಪ್ರಕರಣಗಳ ವಿಚಾರವಾಗಿ ವಿಶೇಷ ಸಿಬಿಐ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಈ ಹಿನ್ನಲೆಯಲ್ಲಿ ಪಂಚಕುಲಾದಲ್ಲಿ ಅರೆಸೇನಾ ಪಡೆ ಭದ್ರತೆ ಒದಗಿಸಲಾಗಿದೆ. ಹಿಂದೆ ನಡೆದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ್ ರಹೀಂ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾನೆ.