ರಾಯ್ಪುರ : ಮದುವೆಯೆಂದರೆ ಎರಡು ಮನಸುಗಳನ್ನು, ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಆದರೆ, ಛತ್ತೀಸ್ಗಢದ ದಂಪತಿಯ ಕತೆಯೇ ಬೇರೆ.ಮದುವೆಯಾಗಿ 11 ವರ್ಷ ಕಳೆದರೂ ಅವರಿಬ್ಬರೂ ಒಟ್ಟಿಗೇ ಸಂಸಾರ ಮಾಡಲು ಒಳ್ಳೆಯ ಮುಹೂರ್ತವೇ ಸಿಕ್ಕಿಲ್ಲ. ಹೀಗಾಗಿ, ಇನ್ನು ಮುಂದೂ ಆ ‘ಮುಹೂರ್ತ’ ಕೂಡಿಬರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿದ ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.ಈ ವಿಚಿತ್ರವಾದ ಸಮಸ್ಯೆಯನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ಆಘಾತವಾಗಿದ್ದು, ಆ ಗಂಡನಿಗೆ ಮದುವೆಯಿಂದ ಹಾಗೂ ಹೆಂಡತಿಯಿಂದ