ಪೊಲೀಸರು ಹೇಳುವ ಪ್ರಕಾರ, ಮಹಿಳೆ ಆಶ್ರಮದ ಮುಖ್ಯಸ್ಥನನ್ನು ಭೇಟಿಯಾಗಲು ಬಂದಿದ್ದಳು. ಆ ಸಮಯದಲ್ಲಿ ಕೆಲವೊಂದು ಸಾಮಗ್ರಿ ತರುವ ನೆಪದಲ್ಲಿ ಮಹಿಳೆಯ ಗಂಡನನ್ನು ಹತ್ತಿರದ ಮಾರುಕಟ್ಟೆಗೆ ಕಳುಹಿಸಿದ ಆಶ್ರಮದ ಮುಖ್ಯಸ್ಥ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ವಿವಾಹಿತ ಮಹಿಳೆಯ ಮೇಲೆ ಆಶ್ರಮದ ಮುಖ್ಯಸ್ಥನೇ ಅತ್ಯಾಚಾರವೆಸಗಿದ ಹೇಯ ಘಟನೆ ನಡೆದಿದೆ. ಮಹಿಳೆ ತನ್ನ ಪತಿ ಜತೆ ಆಶ್ರಮಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.