ಲಕ್ನೋ : ಓದಿನಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕನೊಬ್ಬನು ತನ್ನ ಸ್ನೇಹಿತನನ್ನೇ ಕತ್ತು ಸೀಳಿ ಕೊಂದ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.ಗಾಜಿಯಾಬಾದ್ನ ಆಕಾಶ್ ನಗರ ಪ್ರದೇಶದ ನಿವಾಸಿ ನೀರಜ್ (13)ನನ್ನು 16 ವರ್ಷದ ಬಾಲಕ ಕೊಂದಿದ್ದಾನೆ. ನೀರಜ್ನೊಂದಿಗೆ ಅಪ್ರಾಪ್ತ ಬಾಲಕ ಕೆಲ ತಿಂಗಳಿಂದ ಸ್ನೇಹ ಬೆಳಸಿದ್ದ.ಈ ವೇಳೆ ನಿರಜ್ ದುರ್ಬಲನಾಗಿರುವುದನ್ನು ಗಮನಿಸಿ ಕಳೆದ 5 ತಿಂಗಳಿನಿಂದ ನೀರಜ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ನೀರಜ್ನನ್ನು ಕಾರು ನೋಡುವ ನೆಪದಲ್ಲಿ ಕರೆದೊಯ್ದಿದ್ದಾನೆ.