ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಶಾಸಕರಿಗೆ ಬಿಜೆಪಿ ನೂರು ಕೋಟಿ ಆಮಿಷ- ಹೊಸ ಬಾಂಬ್ ಸಿಡಿಸಿದ ದಿಗ್ವಿಜಯ್ ಸಿಂಗ್

ಭೋಪಾಲ್, ಬುಧವಾರ, 9 ಜನವರಿ 2019 (12:02 IST)

ಭೋಪಾಲ್ : ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಕೈ ಶಾಸಕರೊಬ್ಬರಿಗೆ ಚ ರೂ. ಆಮಿಷ ಒಡ್ಡಿತ್ತು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.


ಈ ಕುರಿತು ಮಾತನಾಡಿರುವ ದಿಗ್ವಿಜಯ್ ಸಿಂಗ್, ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸಬಲ್ ಗಢದ ಕಾಂಗ್ರೆಸ್ ಶಾಸಕ ಬಯಜ್ ನಾಥ್ ಕುಶ್ವಾಹರನ್ನು ಡಾಬಾಕ್ಕೆ ಕರೆದೊಯ್ದು, ಅಲ್ಲಿ ಬಿಜೆಪಿಯ ಮಾಜಿ ಸಚಿವರಾದ ನರೋತ್ತಮ್ ಮಿಶ್ರಾ ಹಾಗೂ ವಿಶ್ವಾಸ್ ಸಾರಾಂಗ್ ಅವರು ಕೈ ಶಾಸಕನಿಗೆ ನೂರು ಕೋಟಿ ರೂ. ಆಮಿಷ ಒಡ್ಡಿದ್ದರು. ಅಷ್ಟೇ ಅಲ್ಲದೇ  ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವುದಾಗಿ  ಭರವಸೆಯನ್ನೂ ನೀಡಿದ್ದರು ಎಂದು ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಸಚಿವ ವಿಶ್ವಾಸ್ ಸಾರಾಂಗ್  ಈ ಆರೋಪವನ್ನು ತಳ್ಳಿಹಾಕಿದ್ದು, ಸಾಧ್ಯವಿದ್ದರೆ ಕಾಂಗ್ರೆಸ್ ಪೂರಕ ಆಧಾರ ನೀಡಿ ಆರೋಪ ಸಾಬೀತುಪಡಿಸಲಿ ಎಂದು ಸವಾಲೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾರತ ಬಂದ್ ಹಿನ್ನಲೆ; ಮುಚ್ಚಿದ ಅಂಗಡಿಗಳಲ್ಲಿ ಕಳ್ಳರ ಕೈಚಳಕ

ಹುಬ್ಬಳ್ಳಿ : ಭಾರತ ಬಂದ್ ಹಿನ್ನಲೆಯಲ್ಲಿ ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು ಮುಚ್ಚಿದ 16 ಅಂಗಡಿಗಳನ್ನು ...

news

15 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ

ಬಳ್ಳಾರಿ : ರಕ್ಷಕನಾಗಬೇಕಾದ ತಂದೆಯೇ ಭಕ್ಷಕನಂತೆ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ...

news

ಎರಡನೇ ದಿನವೂ ಮುಂದುವರಿದ ಕಾರ್ಮಿಕರ ಮುಷ್ಕರ

ಬೆಂಗಳೂರು : ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಬಂದ್ ಕರೆ ನೀಡಿರುವ ...

news

ಸೌದಿ ಅರೇಬಿಯದಲ್ಲಿ ಮಹಿಳೆಯರಿಗೆ ತಮ್ಮ ವೈವಾಹಿಕ ಸ್ಥಿತಿಗತಿ ತಿಳಿಯಲು ಹೊಸ ಕಾನೂನು ಜಾರಿ

ರಿಯಾದ್ : ಸೌದಿ ಅರೇಬಿಯದಲ್ಲಿ ರಹಸ್ಯ ಡೈವೋರ್ಸ್‍ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರಿಗೆ ಅವರ ...