ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದ ಎರಡು ಎಲೆ ಚಿಹ್ನೆ ಉಳಿಸಿಕೊಳ್ಳಲು ಅಣ್ಣಾಡಿಎಂಕೆಯ ಪನ್ನೀರ್ ಸೆಲ್ವಂ ಮತ್ತು ಸಿಎಂ ಪಳನಿಸ್ವಾಮಿ ಬಣ ಒಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ ಎರಡೂ ಬಣಗಳ ಶಾಸಕರ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ವಿರುದ್ಧ ಪಕ್ಷದಲ್ಲಿ ಸುಪ್ತವಾಗಿದ್ದ ಆಕ್ರೋಶ ಈಗ ಭುಗಿಲೆದ್ದಿದೆ. ಕಳೆದ ರಾತ್ರಿಯೇ 25 ಸಚಿವರು ಮತ್ತು ಶಾಸಕರನ್ನೊಳಗೊಂಡ ಸಭೆ