ನವದೆಹಲಿ: ಕಠಿಣ ನಿಯಮಗಳು, ಲಾಕ್ ಡೌನ್ ಕೊನೆಗೂ ಫಲ ಕೊಟ್ಟಿದೆ. ಭಾರತದಲ್ಲಿ ಒಟ್ಟಾರೆ ಪ್ರತಿನಿತ್ಯ ಹೊರಬರುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಪ್ರತಿನಿತ್ಯ 4 ಲಕ್ಷ ಪ್ರಕರಣ ಕಂಡುಬರುತ್ತಿದ್ದ ದೇಶದಲ್ಲಿ ಈಗ ಕೊಂಚ ಇಳಿಕೆಯಾಗಿದ್ದು, ನಿನ್ನೆ 3.66 ಲಕ್ಷ ಪ್ರಕರಣಗಳು ಕಂಡುಬಂದಿವೆಯಷ್ಟೇ. ಇದು ಕೊಂಚ ಸಮಾಧಾನಕರ ಅಂಶವಾಗಿದೆ.ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡು, ಕೇರಳ, ಮಧ್ಯಪ್ರದೇಶ ಸೇರಿದಂತೆ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ.