ಕಾರ್ಯಾಚರಣೆಗೆ ನಿರಾಕ್ಷೇಪಣಾ ಪ್ರಮಾಣಪತ್ರ

ನವದೆಹಲಿ| Ramya kosira| Last Modified ಮಂಗಳವಾರ, 12 ಅಕ್ಟೋಬರ್ 2021 (08:31 IST)
ನವದೆಹಲಿ : ಭಾರತದ ಕೋಟ್ಯಧಿಪತಿ ರಾಕೇಶ್ ಜುಂಝನ್ವಾಲಾ ಅವರು ಆರಂಭಿಸಲಿರುವ ವಿಮಾನಯಾನ ಕಂಪನಿ 'ಆಕಾಶ್ ಏರ್' ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ನೀಡಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವಾಲಯದ ಬೆಂಬಲ ಮತ್ತು ಎನ್ಒಸಿ ನೀಡಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಆಕಾಶ್ ಏರ್ನ ಸಿಇಒ ವಿನಯ್ ದುಬೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದುಬೆ ಅವರು ಜೆಟ್ ಏರ್ವೇಸ್ನ ಮಾಜಿ ಸಿಇಒ ಆಗಿದ್ದಾರೆ.
ಹೊಸ ವಿಮಾನ ಸಂಸ್ಥೆಯು 2022ರ ಬೇಸಿಗೆಯ ವೇಳೆಗೆ ಕಾರ್ಯಾರಂಭ ಮಾಡುವ ಗುರಿಯನ್ನು ಹೊಂದಿದೆ ಎಂದು ಎನ್ಎಸ್ವಿ ಏವಿಯೇಷನ್ ಪ್ರವೇಟ್ ಲಿಮಿಟೆಡ್ ಹೇಳಿದೆ.
 
ಇದರಲ್ಲಿ ಇನ್ನಷ್ಟು ಓದಿ :