ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಉಂಟಾಗಿದ್ದು, ಭಾನುವಾರ ಎನ್ಸಿಪಿ ಪಾಳಯದ ಅಜಿತ್ ಪವಾರ್ ಹಾಗೂ 8 ಇತರೆ ಶಾಸಕರು ಮಹಾರಾಷ್ಟ್ರ ಸರ್ಕಾರದ ಜತೆ ಸೇರಿದ್ದಾರೆ. ಅಜಿತ್ ಪವಾರ್ ಡಿಸಿಎಂ ಆಗಿದ್ದು, ಇತರೆ 8 ಮಂದಿ ಎನ್ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಇವರ ವಿರುದ್ಧ ಎನ್ಸಿಪಿ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ಗೆ ಅನರ್ಹತೆ ಅರ್ಜಿ ಕಳಿಸಿದ್ದಾರೆ. ಡಿಸಿಎಂ ಅಜಿತ್ ಪವಾರ್