ಚೆನ್ನೈ: ಒಂದೆಡೆ ಡಿಎಂಕೆ ಪಕ್ಷದ ನಾಯಕ ಎಂ ಕರುಣಾನಿಧಿ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಪಕ್ಷದ ಪುಡಾರಿ ನಾಯಕರಿಬ್ಬರು ಬಿರಿಯಾನಿಗಾಗಿ ಹೋಟೆಲ್ ಸಿಬ್ಭಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದಾರೆ. ಡಿಎಂಕೆ ಯುವ ಬಣದ ನಾಯಕರಾದ ಯುವರಾಜ್ ಮತ್ತು ದಿವಾಕರ್ ಎಂಬಿಬ್ಬರು ಪುಕ್ಸಟೆ ಬಿರಿಯಾನಿ ಕೊಡಲಿಲ್ಲವೆಂದು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದಲ್ಲದೆ, ಅಂತರ್ಜಾಲದಲ್ಲೂ ಹರಿದಾಡಿ ವೈರಲ್ ಆಗಿತ್ತು.ಈ ಹಿನ್ನಲೆಯಲ್ಲಿ ಅವರಿಬ್ಬರನ್ನೂ