ಇಬ್ಬರು ಪುರುಷರು ಸೇರಿ ಈವೆಂಟ್ ಮ್ಯಾನೇಜರ್ ಗೆ ಹೀಗಾ ಮಾಡೋದು?

ನವದೆಹಲಿ| pavithra| Last Modified ಮಂಗಳವಾರ, 24 ನವೆಂಬರ್ 2020 (06:34 IST)
ನವದೆಹಲಿ : ಈವೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯ ಇಬ್ಬರು ಪುರುಷರು  ಮಾನಭಂಗ ಎಸಗಿದ ಘಟನೆ ಏರೋಸಿಟಿಯ ಪಂಚತಾರಾ ಹೋಟೆಲ್ ನಲ್ಲಿ ನಡೆದಿದೆ.

ಸಂದೀಪ್ ಮೆಹ್ತಾ ಮತ್ತು ನವೀನ್ ದಾವರ್ ಇಂತಹ ಕೃತ್ಯ ಎಸಗಿದ ಆರೋಪಿಗಳು. ಮಹಿಳೆಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮೆಹ್ತಾ ಜೊತೆ ಚಾಟ್ ಮಾಡಲು ಶುರುಮಾಡಿದ್ದಾಳೆ. ಬಳಿಕ ಅವರಿಬ್ಬರು ಭೇಟಿಯಾಗಲು ದೆಹಲಿಯ ಏರೋಸಿಟಿಯ ಪಂಚತಾರಾ ಹೋಟೆಲ್ ಗೆ ಬಂದರು. ಅಲ್ಲಿ ಮೆಹ್ತಾ ಸ್ನೇಹಿತ ದಾವರ್ ನನ್ನು ಭೇಟಿಯಾದಳು. ಅಲ್ಲಿ ಇಬ್ಬರು ಸೇರಿ ಆಕೆಗೆ ಕಿರುಕುಳ ನೀಡಿ ಮಾನಭಂಗ ಎಸಗಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :