ಕಾಂಗರೂ ಕೋರ್ಟ್ ನೀಡಿದ ಶಿಕ್ಷೆಯನ್ನು ವಿರೋಧಿಸಿದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದು ಸ್ಥಳಿಯರಿಗೆ ಗೊತ್ತಿದೆ. ಸ್ಥಳಿಯರು ನ್ಯಾಯಾಲಯದ ತೀರ್ಪಿನ ವಿಳಂಬ ನೀತಿಯಿಂದಾಗಿ ಕಾಂಗರೂ ಕೋರ್ಟ್ ಮೊರೆಹೋಗುತ್ತಾರೆ. ಆದರೆ, ಇಲ್ಲಿ ನೀಡುವ ತೀರ್ಪು ಮಾತ್ರ ಘನಘೋರ. ಇದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ. ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳಿಗೆ ಗ್ರಾಮದ ಕಾಂಗರೂ ಕೋರ್ಟ್ ಎಂಜಲನ್ನು ನೆಕ್ಕುವಂತೆ ಆದೇಶಿಸಿತು. ತೃಣಮೂಲ ಕಾಂಗ್ರೆಸ್ ನೇತೃತ್ವದ ಮಹಿಳಾ ಕೌನ್ಸಿಲರ್ ನೇತೃತ್ವದಲ್ಲಿ ಈ ಸಭೆ ನಡೆಯಿತು.