ಮದುವೆಗಾಗಿ ಅಲಂಕಾರ ಮಾಡಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋದ ವಧುಗೆ ಆಗಿದ್ದೇನು ಗೊತ್ತಾ?

ಪಂಜಾಬ್, ಭಾನುವಾರ, 27 ಜನವರಿ 2019 (07:30 IST)

 
ಪಂಜಾಬ್ : ಮದುವೆಗಾಗಿ ಅಲಂಕಾರ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಬಂದಿದ್ದ ವಧುವನ್ನು ದುಷ್ಕರ್ಮಿಗಳ ಗುಂಪೊಂದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುವ ಘಟನೆ ಪಂಜಾಬ್ ನ ಮುಕ್ತಸ್ಸಾರ್ ಪ್ರದೇಶದಲ್ಲಿ ನಡೆದಿದೆ.ತನ್ನ ವಿವಾಹ ಇನ್ನು ಕೆಲ ಹೊತ್ತಿನಲ್ಲೇ ನಡೆಯಲಿದ್ದ ಕಾರಣ ವಧು, ಅಲಂಕಾರ ಮಾಡಿಸಿಕೊಳ್ಳಲು ಬೆಳಗಿನ ಜಾವವೇ ಬ್ಯೂಟಿ ಪಾರ್ಲರ್ ಒಂದಕ್ಕೆ ತೆರಳಿದ್ದಳು. ಆ ವೇಳೆ ದುಷ್ಕರ್ಮಿಗಳ ತಂಡ ಬ್ಯೂಟಿ ಪಾರ್ಲರ್ ಮುಂದೆ ಕಾದು ಕುಳಿತು, ವಧು ಹೊರ ಬರುತ್ತಲೇ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಗ ಆಕೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಕಾರಿನ ತನಕ ಎಳೆದೊಯ್ದು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಯುವತಿಯನ್ನು ರಕ್ಷಿಸಿದ್ದಾರೆ. ಹಾಗೇ ಈ ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದವರಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಿಯಾಂಕ ಗಾಂಧಿ ಸಕ್ರೀಯ ರಾಜಕಾರಣಕ್ಕೆ ಎಂಟ್ರಿ ಕುರಿತು ಈಶ್ವರಪ್ಪ ವ್ಯಂಗ್ಯ

ಬೆಂಗಳೂರು : ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ...

news

ತನ್ನನ್ನು ನೋಡಲು ಬರುತ್ತಿರುವ ಪೋಷಕರನ್ನು ತಡೆಯಲು ವಿದ್ಯಾರ್ಥಿಯೊಬ್ಬ ಮಾಡಿದ್ದೇನು ಗೊತ್ತಾ?

ಪ್ಯಾರಿಸ್ : ದೂರದೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ತಮ್ಮ ತಂದೆತಾಯಿಯನ್ನು ನೋಡಲು ...

news

ಗಾಂಜಾ ಸೇವನೆ: ಆರೋಪಿಗಳು ಅಂದರ್

ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

news

ಶಾಸಕ ಗಣೇಶ್ ನನ್ನು ಬಂಧಿಸಿ ಎಂದ ಸುರೇಶ್ ಬಾಬು

ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ನಡೆಸಿರುವುದನ್ನು ನಾನು ಖಂಡಿಸುತ್ತೇನೆ. ...