ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಿವಾಸಿ ಆನಂದ್(30) ಈ ಕೃತ್ಯ ಎಸಗಿದ ಕಾಮುಕನಾಗಿದ್ದು, ಈತ 31 ವರ್ಷದ ಮಹಿಳೆಯೊಬ್ಬಳು ಸ್ರೇಹಿತರ ಜೊತೆ ಪಬ್ ಗೆ ಹೋಗಿ ಪಾರ್ಟಿ ಮುಗಿಸಿಕೊಂಡು ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಆಕೆಯ ಎದೆಯಭಾಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆ ವೇಳೆ ಮಹಿಳೆ ಕಿರುಚಿದಾಗ ಆಕೆಯ ಸ್ನೇಹಿತರು ಅಲ್ಲಿಗೆ ಬರುತ್ತಿರುವುದನ್ನು ಕಂಡು ಆತ ಪರಾರಿಯಾಗಿದ್ದಾನೆ.