Widgets Magazine

ಪತ್ನಿ, ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ವ್ಯಕ್ತಿಗೆ ಆಮೇಲೆ ಆಗಿದ್ದೇನು ಗೊತ್ತಾ?

ಗುಜರಾತ್| pavithra| Last Modified ಮಂಗಳವಾರ, 22 ಜನವರಿ 2019 (08:55 IST)
ಗುಜರಾತ್ : ಕ್ಷುಲಕ ಕಾರಣಕ್ಕೆ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ವ್ಯಕ್ತಿ ಬಳಿಕ ತಾನೂ ರೈಲಿಗೆ ಜಿಗಿದು ಮೃತಪಟ್ಟಿರುವ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.

ಬಲವಂತ್ ರಾಯ್ಪಾಸಿನ್ ಸಿಂಧಾಲ್ ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿ ಮೃತಪಟ್ಟ ವ್ಯಕ್ತಿ. ಮದುವೆಯಾಗಿ ಹದಿನೆಂಟು ವರ್ಷ ಕಳೆದರೂ ಈ ದಂಪತಿಗಳು ಪದೇಪದೇ ಕ್ಷುಲಕ ಕಾರಣಕ್ಕೆ ಜಗಳವಾಡುತ್ತಿದ್ದರು. ಇದರಿಂದ ಕೋಪಗೊಂಡಿದ್ದ ಬಲವಂತ್ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಆ ವೇಳೆ ತಾಯಿಯ ರಕ್ಷಣೆಗೆಂದು ಬಂದ ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಪತ್ನಿ ಮೃತಪಟ್ಟಿದ್ದಾರೆ. ಹಾಗೇ
ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಆರೋಪಿಯ

ಹುಡುಕಾಟ ನಡೆಸುತ್ತಿದ್ದಾಗ ಆರೋಪಿ ಬಲವಂತ್ ನ ಶವ ಕರ್ಜನ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ. ಸ್ಥಳದಲ್ಲಿ ಪತ್ತೆಯಾದ ಫೋನ್, ಸಿಮ್ ಕಾರ್ಡ್, ಟ್ಯಾಟೊ ಮತ್ತು ಬೈಸಿಕಲ್ ಮೂಲಕ ಆ ಶವ
ಆರೋಪಿ ಬಲವಂತ್ ಎಂಬುದಾಗಿ ಗುರುತಿಸಲಾಗಿದೆ. ಆತ ಸ್ಥಳೀಯ ರೈಲಿನ ಮುಂದೆ ಜಿಗಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಡೌನ್
ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :