ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದ ಮಹಿಳೆಗೆ ಅಲ್ಲಿ ಆಗಿದ್ದೇನು ಗೊತ್ತಾ?

ಅಮೃತಸರ| pavithra| Last Modified ಭಾನುವಾರ, 22 ನವೆಂಬರ್ 2020 (06:51 IST)
: ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದ ಮಹಿಳೆಯ ಮೇಲೆ 6 ಮಂದಿ ಪುರುಷರು ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದ ಮಹಿಳೆ ಮನೆಗೆ ಹಿಂತಿರುಗುವಾಗ ದ್ವಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯನ್ನು ಪರಿಚಯ ಮಾಡಿಕೊಂಡು ಅತ್ತಾರಿ-ವಾಗಾ ಗಡಿಗೆ ಬರುವಂತೆ ಮನವೊಲಿಸಿದ. ಆಕೆ ಅವನ ಜೊತೆ ಹೋರಾಟಾಗ ಆತ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಆತನ ಜೊತೆ ಮತ್ತೆ ಐವರು ಪುರುಷರು ಸೇರಿ ಮಾನಭಂಗ ಎಸಗಿದ್ದಾರೆ. ಹಾಗೇ ಪೊಲೀಸರಿಗೆ ತಳಿಸದಂತೆ ಬೆದರಿಕೆ ಹಾಕಿದ್ದಾರೆ.

ಆದರೆ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :