ಪತ್ನಿ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತಿ ಮಾಡಿದ್ದೇನು ಗೊತ್ತಾ?

ಚೆನ್ನೈ, ಗುರುವಾರ, 7 ಮಾರ್ಚ್ 2019 (06:51 IST)

ಚೆನ್ನೈ : ಪತ್ನಿ ಪರ ಪುರುಷನ ಜೊತೆ ಹೊಂದಿದ್ದಾಳೆ ಎಂದು ಅನುಮಾನಗೊಂಡ ಪತಿಯೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕೊಂದು ಪೀಸ್ ಪೀಸ್ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಗಂಗಾ ಮೃತ ದುರ್ದೈವಿ, ರಾಜಶೇಖರ್ ಪತ್ನಿಯನ್ನು ಕೊಂದ ಪಾಪಿ ಪತಿ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಗಂಗಾಳನ್ನು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ  ಆಗಾಗ ಬೇರೆ ಬೇರೆ ಕಡೆ ಟ್ರಾವೆಲ್ ಮಾಡುತ್ತಿದ್ದ ಈತನಿಗೆ ಪತ್ನಿ ಬೇರೆ ವ್ಯಕ್ತಿಯ ಜೊತೆ ಸಂಬಂಧವಿಟ್ಟುಕೊಂಡಿದ್ದಾಳೆ  ಎಂಬ ಅನುಮಾನವಿತ್ತು. ಈ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.


ಆದರೆ ಮಾರ್ಚ್ 1 ರಂದು ಗಂಗಾ ಅಂಗಡಿಯಿಂದ ಹಾಲನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ ರಾಜಶೇಖರ್ ಮತ್ತು ಎಂಟು ಮಂದಿ ಗೆಳೆಯರು ಸೇರಿ ಆಕೆಯ ಮೇಲೆ ಹಲ್ಲೆ ಮಾಡಿ ಪೀಸ್ ಪೀಸ್ ಮಾಡಿ ಕೊಲೆ ಮಾಡಿದ್ದಾರೆ. ಈ ಕೊಲೆಯ ಬಗ್ಗೆ ಮಾಹಿತಿ ತಿಳಿದ ಮಧುಕ್ಕರೈ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಪತಿ ಸಿಕ್ಕಿಹಾಕಿಕೊಂಡಿದ್ದಾನೆ. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಜಶೇಖರ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರಿಂದ ಸಾಮೂಹಿಕ ಅತ್ಯಾಚಾರ

ಮುಂಬೈ : 16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರು ಸೇರಿಕೊಂಡು ಏಳು ತಿಂಗಳ ಕಾಲ ಸಾಮೂಹಿಕ ...

news

ಸ್ಯಾಂಡಲ್ ವುಡ್ ನನ್ನ ಪರ ಇದೆ ಎಂದ ಸುಮಲತಾ

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯನವರು ಸುಮಲತಾಗೆ ಟಿಕೆಟ್ ನಿರಾಕರಣೆ ...

news

ಪೊಲೀಸರೊಂದಿಗೆ ಕೆಂಡವಾಗಿ ಕೆಂಡ ಹಾಯ್ದ ಭಕ್ತರು!

ಪೊಲೀಸರೊಂದಿಗೆ ಭಕ್ತರು ಕೆಂಡದಂತಾಗಿ ಕೆಂಡವನ್ನು ಹಾಯ್ದಿರುವ ಘಟನೆ ನಡೆದಿದೆ.

news

ಕೈತಪ್ಪಿದ ನಿಗಮ ಮಂಡಳಿ; ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರ ಆಡಳಿತದಲ್ಲಿದೆ. ಆದರೆ ನಿಗಮ ಮಂಡಳಿ ಕೈತಪ್ಪಿದ ಕಾರಣ ...