ಅಶ್ಲೀಲ ಫೋನ್ ಕರೆಗಳನ್ನು ಮಾಡುತ್ತಿದ್ದ ವ್ಯಕ್ತಿಗೆ ತಾಯಿ ಮಗಳು ಸೇರಿ ಮಾಡಿದ್ದೇನು ಗೊತ್ತಾ?

ಕೊಯಮತ್ತೂರು| pavithra| Last Updated: ಬುಧವಾರ, 21 ಅಕ್ಟೋಬರ್ 2020 (09:11 IST)
ಕೊಯಮತ್ತೂರು : ಅಶ್ಲೀಲ ಫೋನ್ ಕರೆಗಳನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಯುವತಿ ಹಾಗೂ ಆಕೆಯ ತಾಯಿ ಸೇರಿ ಕೊಲೆ ಮಾಡಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಎನ್ ಪೆರಿಯಸಾಮಿ ಮೃತಪಟ್ಟ ವ್ಯಕ್ತಿ. ಯುವತಿಗೆ ಕೆಲವು ದಿನಗಳಿಂದ ಪೆರಿಯಸಾಮಿಯಿಂದ ಫೋನ್ ಕರೆಯೊಂದು ಬರುತ್ತಿದ್ದು, ಅದರಲ್ಲಿ ಆತ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದರಿಂದ ಬೇಸತ್ತ ಯುವತಿ ತನ್ನ ತಾಯಿಯ ಸಹಾಯದಿಂದ  ಆತನಿಗೆ ತಮ್ಮ ಮನೆಯ ಬಳಿ ಬರಲು ಹೇಳಿದ್ದಾಳೆ. ಮನೆಯ ಬಳಿ ಬಂದ ಪೆರಿಯಸಾಮಿ ಬಳಿ ತಾಯಿ ಮಗಳು   ವಾದಕ್ಕಿಳಿದ್ದಾರೆ. ಕೊನೆಗೆ ಇಬ್ಬರು ಸೇರಿ ಆತನನ್ನು ಹೊಡೆದು ಕೊಂದಿದ್ದಾರೆ.> > ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ ಎನ್ನಲಾಗಿದೆ.  


ಇದರಲ್ಲಿ ಇನ್ನಷ್ಟು ಓದಿ :