ನೋಟು ಅಮಾನ್ಯೀಕರಣ ಘೋಷಣೆ ವೇಳೆ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್ ಸಚಿವರನ್ನು ಏನು ಮಾಡಿದ್ದಾರಂತೆ ಗೊತ್ತಾ?

ಶಿಮ್ಲಾ, ಶನಿವಾರ, 18 ಮೇ 2019 (10:46 IST)

ಶಿಮ್ಲಾ : ದೇಶದಲ್ಲಿ ನೋಟುಗಳ ಅಮಾನ್ಯೀಕರಣ ಘೋಷಣೆ ಮಾಡುವ ವೇಳೆ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್​ ನಲ್ಲಿರುವ ಎಲ್ಲಾ ಸಚಿವರನ್ನೂ ಕೂಡಿ ಹಾಕಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ದೇಶದ ಮೇಲೆ ನೋಟುಗಳ ಅಮಾನ್ಯೀಕರಣದಂತಹ ಕಠಿಣ ನಿಲುವನ್ನು ಹೇರುವ ಮೊದಲು ತಮ್ಮ ಕ್ಯಾಬಿನೆಟ್​ನಲ್ಲಿನ ಎಲ್ಲಾ ಸಚಿವರನ್ನು ಪ್ರಧಾನಿ ಮಂತ್ರಿಗಳ ಮನೆಯಿರುವ ದೆಹಲಿ ರೇಸ್​ಕೋರ್ಟ್​ ರಸ್ತೆಯಲ್ಲಿರುವ ಒಂದು ಕಟ್ಟಡದಲ್ಲಿ ಕೂಡಿ ಹಾಕಿದ್ದರು. ಈ ಸಂದರ್ಭದಲ್ಲಿ ವಿಶೇಷ ರಕ್ಷಣಾ ದಳದ ಅಧಿಕಾರಿಗಳೇ ಸಚಿವರಿಗೆ ರಕ್ಷಣೆ ನೀಡಿದ್ದು, ಅವರೇ ನನಗೆ ಈ ವಿಷಯವನ್ನು ತಿಳಿಸಿದ್ದಾರೆ” ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.


ಅಲ್ಲದೇ “ನೋಟು ಅಮಾನ್ಯೀಕರಣದ ತೀರ್ಮಾನದಿಂದ ಹಲವರು ಯುವಕರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾದರೆ, ಜಿಎಸ್​ಟಿ ತೀರ್ಮಾನದಿಂದಾಗಿ ಗ್ರಾಮೀಣ ಭಾಗದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಾಗಿಲು ಎಳೆದುಕೊಳ್ಳುವಂತಾಗಿತ್ತು. ಮೋದಿಯ ಈ ಎರಡು ತೀರ್ಮಾನಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಭಾರೀ ಪೆಟ್ಟಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇದಾರನಾಥ, ಬದ್ರಿನಾಥ್ ದೇವಾಲಯಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ : ಈ ಬಾರಿಯ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮೇ 19ರಂದು ನಡೆಯುತ್ತಿದ್ದು, ಮೇ 23ರಂದು ಮತ ...

news

ಪ್ರಿಯತಮೆ ಮೇಲಿನ ಕೋಪಕ್ಕೆ ಪ್ರಾಣವನ್ನೇ ಕಳೆದುಕೊಂಡ ಯುವಕ

ಮೈಸೂರು : ಪ್ರಿಯತಮೆ ಮೋಸ ಮಾಡಿದ ಹಿನ್ನಲೆಯಲ್ಲಿ ಪ್ರಿಯಕರನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ...

news

ಮನ್ ಕೀ ಬಾತ್ ನ ಕೊನೆಯ ಎಪಿಸೋಡ್ ನೋಡ್ರಪ್ಪಾ.. ಮೋದಿಗೆ ಅಖಿಲೇಶ್ ಯಾದವ್ ಟಾಂಗ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗೆ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ...

news

ಧರ್ಮಸ್ಥಳಕ್ಕೂ ತಟ್ಟಿದೆ ಜಲಕ್ಷಾಮ; ಪ್ರಕಟಣೆಯೊಂದನ್ನು ಹೊರಡಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಮಂಗಳೂರು : ರಾಜ್ಯದೆಲ್ಲಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದೀಗ ಕರ್ನಾಟಕದ ಪ್ರಸಿದ್ಧ ದೇವಾಲಯ ...