ನವದೆಹಲಿ : ತನ್ನ ನೆಚ್ಚಿನ ಶೋ ನೋಡಲು ತಮ್ಮ ಟಿ.ವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ 12 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಪೋಷಕರು ಹೊರಗೆ ಹೋಗಿದ್ದ ವೇಳೆ ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಆಗ ಅಣ್ಣ ಓದಲೆಂದು ಒಳಗೆ ಹೋದ ನಂತರ ಬಾಲಕಿ ತನ್ನ ನೆಚ್ಚಿನ