ಕುಡಿದ ಮತ್ತಿನಲ್ಲಿ ತಂದೆ ಮಾಡಿದ ನೀಚ ಕೆಲಸವೇನು ಗೊತ್ತೇ?

ಉತ್ತರಪ್ರದೇಶ| pavithra| Last Modified ಶನಿವಾರ, 2 ಜನವರಿ 2021 (08:23 IST)
: ಕುಡಿದ ವ್ಯಕ್ತಿಯೊಬ್ಬ ತನ್ನ 2 ತಿಂಗಳ ಮಗುವನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಕಡೇರ್ಘರ್ ಗ್ರಾಮದಲ್ಲಿ  ನಡೆದಿದೆ.

ಕುಡಿದು ಮನೆಗೆ ಬಂದ ವ್ಯಕ್ತಿಯ ಬಳಿ ಹೆಂಡತಿ ಜಗಳವಾಡಿದ್ದಾಳೆ. ಬಳಿಕ ಪತ್ನಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಪತ್ನಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಆ ವೇಳೆ ಮಗುವಿಗೂ ಕೂಡ ಹೊಡೆದಿದ್ದಾನೆ. ಇದರಿಂದ ಮಗು ಸ್ಥಳದಲ್ಲೆ ಸಾವನಪ್ಪಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪತ್ನಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :