ಆರೋಪಿ ಪತಿ ಲಿಯಾಕತ್ ತನ್ನ ಪತ್ನಿಗೆ ಮಟನ್ ಮಾಡಿಕೊಡುವಂತೆ ಕೋರಿದ್ದಾನೆ. ಆದರೆ, ಮನೆಯಲ್ಲಿ ಮಟನ್ ಮಾಡುವ ಮಸಾಲೆ ವಸ್ತುಗಳಿಲ್ಲವಾದ್ದರಿಂದ ಮಟನ್ ಮಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.