ಪೊಲೀಸ್ ಅಧಿಕಾರಿಯ ವೇಷಧರಿಸಿ ಆಸ್ಪತ್ರೆಗೆ ಬಂದ ಭದ್ರತಾ ಸಿಬ್ಬಂದಿ ಅಲ್ಲಿ ಮಾಡಿದ್ದೇನು ಗೊತ್ತಾ?

ಪುಣೆ| pavithra| Last Modified ಶನಿವಾರ, 26 ಡಿಸೆಂಬರ್ 2020 (07:26 IST)
ಪುಣೆ : ಸರ್ಕಾರಿ ಆಸ್ಪತ್ರೆಯ 47 ವರ್ಷದ ಭದ್ರತಾ ಸಿಬ್ಬಂದಿ ಪೊಲೀಸ್ ಅಧಿಕಾರಿಯ ವೇಷಧರಿಸಿ 19 ವರ್ಷದ ರೋಗಿಯ ಕೋಣೆಗೆ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮಹಾರಾಷ್ಟ್ರದ ಪುಣೆಯ ಸರ್ಕಾರ ಆಸ್ಪತ್ರೆಯಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಯ ವೇಷಧರಿಸಿ ಆಸ್ಪತ್ರೆಯ ಒಳಗೆ ಬಂದ ಭದ್ರತಾ ಸಿಬ್ಬಂದಿ ರೋಗಿಯ ಚಿಕಿತ್ಸೆಯ ಬಗ್ಗೆ ಕೇಳುವ ನೆಪದಲ್ಲಿ ಆಕೆಯನ್ನು ಬೇರೆ ವಾರ್ಡ್ ಗೆ ಕರೆದೊಯ್ದು ಅಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಇತರ ರೋಗಿಗಳ ಜೊತೆಗೆ ಈ ರೀತಿ ವರ್ತಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :