Widgets Magazine

ಮದುವೆಗೆ ತೆರಳುತ್ತಿದ್ದ ಯುವತಿಗೆ ಯುವಕ ಮಾಡಿದ್ದೇನು ಗೊತ್ತಾ?

ಜೈಪುರ| pavithra| Last Modified ಶುಕ್ರವಾರ, 27 ನವೆಂಬರ್ 2020 (06:07 IST)
: 22 ವರ್ಷದ ಯುವಕನೊಬ್ಬ 20 ವರ್ಷದ ಯುವತಿಯನ್ನು ಅಪಹರಿಸಿ  14 ದಿನಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯ ಆಂಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ.

ಯುವತಿ ಮದುವೆಗೆ ಹೋಗಿದ್ದಾಗ ಆ ವೇಳೆ ಅವಳನ್ನು ಅಪಹರಿಸಿ ಅರಣ್ಯಕ್ಕೆ ಕರೆದೊಯ್ದು ಅಲ್ಲಿ ಅವಳನ್ನು ಕೂಡಿಹಾಕಿ 2 ವಾರಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೊನೆಗೆ ಯುವತಿ ಹೇಗೋ ಹರಸಾಹಸಪಟ್ಟು ತನ್ನ ತಂದೆಗೆ ಕಾಲ್ ಮಾಡಿ ತಾನಿದ್ದ ಕಡೆ ಕರೆಯಿಸಿಕೊಂಡಿದ್ದಾಳೆ.  ಬಳಿಕ ತಂದೆ ಅವಳನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಯುವತಿ ಕಾಣೆಯಾದ ಬಗ್ಗೆ ದೂರು ದಾಖಲಿಸದ ಕಾರಣ ಎರಡರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಯನ್ನು ಇನ್ನೂ ಬಂಧಿಸಲಾಗಲಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :