ಫೇಸ್ಬುಕ್ ನಲ್ಲಿ ಯುವಕರನ್ನು ಪರಿಚಯಮಾಡಿಕೊಂಡ ಯುವತಿ ನಂತರ ಮಾಡುತ್ತಿದ್ದದ್ದೇನು ಗೊತ್ತಾ?

ರಾಜಸ್ತಾನ, ಮಂಗಳವಾರ, 12 ಫೆಬ್ರವರಿ 2019 (07:10 IST)

: ಹುಡುಗರ ಜೊತೆ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಕೇಸ್ ಹಾಕುವುದಾಗಿ ಬೆದರಿಸಿ ಅವರ ಬಳಿ ಇದ್ದ ಹಣ ದೋಜುತ್ತಿದ್ದ ಖತರ್ನಾಕ್ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.


ಈ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ದೆಹಲಿ ಮೂಲದ 28 ವರ್ಷದ ಹುಡುಗಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಅದರಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು ಬಳಿಕ ಟೀ ಕುಡಿಯೋ ನೆಪದಲ್ಲಿ ಹುಡುಗರನ್ನು ಕರೆಯುತ್ತಿದ್ದಳಂತೆ. ಅಷ್ಟೇ ಅಲ್ಲದೇ ಈ ಚಾಲಾಕಿ ಹುಡುಗಿ ಯುವಕರಿಗೆ ಗರ್ಭ ನಿರೋಧಕ ಮಾತ್ರೆ ತರುವಂತೆ ಹೇಳಿ ಅವರ ಜೊತೆ ಸಂಬಂಧ ಬೆಳೆಸುತ್ತಿದ್ದಳಂತೆ.


ನಂತರ ಅತ್ಯಾಚಾರದ ಕೇಸ್ ಹಾಕುವುದಾಗಿ ಬೆದರಿಸಿ ಹುಡುಗರ ಬಳಿ ಇದ್ದ ಹಣ ದೋಚುತ್ತಿದ್ದಳಂತೆ. ಮರ್ಯಾದೆಗೆ ಹೆದರಿ ಮೋಸ ಹೋದ ಯಾವ ಯುವಕರು ಪೊಲೀಸ್ ಠಾಣೆಗೆ ಈವರೆಗೆ ದೂರು ನೀಡಿರಲಿಲ್ಲ. ಆದರೆ ಇದೀಗ ಆಕೆಯಿಂದ ಮೋಸ ಹೋದ ಯುವಕನೊಬ್ಬ ಆಕೆಯ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ- ರಾಜಕೀಯ ನಿವೃತ್ತಿ ಘೋಷಿಸಿದ ಹೆಚ್ ಡಿ ದೇವೇಗೌಡ

ನವದೆಹಲಿ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಇನ್ನು ಮುಂದೆ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧೆ ...

news

ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್‍ ಗೆ ಬಂದ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ- ಈಶ್ವರಪ್ಪ ವಾಗ್ದಾಳಿ

ಬೆಂಗಳೂರು : ಆಪರೇಷನ್ ಜನಕ ಎಂದರೇ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಕಾಂಗ್ರೆಸ್‍ಗೆ ಹೋದಾಗಲೇ ರಾಜ್ಯದಲ್ಲಿ ...

news

ಕೈ ಶಾಸಕರ ಅನರ್ಹಕ್ಕೆ ಕಾಂಗ್ರೆಸ್ ಮನವಿ

ಕಾಂಗ್ರೆಸ್ ನ ಅತೃಪ್ತ ನಾಲ್ವರು ಶಾಸಕರ ವಿರುದ್ಧ ಶಿಸ್ತು ಕ್ರಮಕ್ಕೆ ಕೈಪಡೆಯ ನಾಯಕರು ಮುಂದಾಗಿದ್ದಾರೆ.

news

ಆಪರೇಷನ್ ಆಡಿಯೋ; ತನಿಖೆಗೆ ಸಭಾಧ್ಯಕ್ಷ ಸೂಚನೆ

ಆಪರೇಷನ್ ಕಮಲ ಕುರಿತ ಆಡಿಯೋ ಇಂದು ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.