ತಂಗಿ, ತಂಗಿ ಎಂದು ಕರೆದು ನಂತರ ಅದೇ ಯುವತಿಯೊಂದಿಗೆ ಓಡಿಹೋಗಿ ಯುವಕನೊಬ್ಬ ವಿವಾಹವಾದ ವಿಚಿತ್ರ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ. ಸಂಗಾರೆಡ್ಡಿಯ ಶಾಂತಿನಗರ ಬಡಾವಣೆಯ ನಿವಾಸಿಯಾದ 21 ವರ್ಷದ ಇಂತಿಯಾಜ್ ನಾಂಪಲ್ಲಿ ಬೇಕರಿಯಲ್ಲಿ ಉದ್ಯೋಗದಲ್ಲಿದ್ದನು. ಉದ್ಯೋದ ಅವಧಿ ಮುಗಿದ ನಂತರ ಹತ್ತಿರದಲ್ಲಿರುವ ತಮ್ಮ ಸಂಬಂಧಿಕರಾದ ಸಯ್ಯದ್ ಅಲಿ ಮನೆಗೆ ಬಂದು ಹೋಗುತ್ತಿದ್ದನು. ಸಂಬಂಧಿಕರ ಮನೆಗೆ ನಿರಂತರವಾಗಿ ತೆರಳುತ್ತಿದ್ದ ಇಂತಿಯಾಜ್, ಸಂಬಂಧಿಕರ 19 ವರ್ಷದ ಪುತ್ರಿಯನ್ನು ತಂಗಿ ತಂಗಿ ಎಂದು ಕರೆಯುತ್ತಿದ್ದನು.