ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದು ಯಾಕಾಗಿ ಗೊತ್ತೇ?

ನವದೆಹಲಿ, ಗುರುವಾರ, 12 ಜುಲೈ 2018 (12:54 IST)

ನವದೆಹಲಿ : ಮದುವೆಯ ಪಾವಿತ್ರ್ಯತೆ ರಕ್ಷಿಸಲು 157 ವರ್ಷದ ಹಿಂದೆ ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಮನವಿಯೊಂದನ್ನು ಮಾಡಿದೆ.


ಯಾವುದೇ ಪುರುಷ ಪರಸ್ತ್ರೀಯೊಂದಿಗೆ ಆಕೆಯ ಪತಿಯ ಅನುಮತಿ ಇಲ್ಲದೇ ಸಂಬಂಧ ಹೊಂದಿದರೆ ಆತನಿಗೆ ಭಾರತೀಯ ದಂಡ ಸಂಹಿತೆ 497ರ ಪ್ರಕಾರ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಮಹಿಳೆಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಇದು ಬ್ರಿಟಿಷರ ಕಾಲದಲ್ಲಿ ಜಾರಿಯಾದ ಕಾನೂನಾಗಿದೆ.


ಆದರೆ ವ್ಯಭಿಚಾರ (ಅಕ್ರಮ ಸಂಬಂಧ) ಪ್ರಕರಣಗಳಲ್ಲಿ ಪುರುಷ ಮತ್ತು ಮಹಿಳೆ- ಇಬ್ಬರನ್ನೂ ಸಮಾನ ದೋಷಿಗಳು ಎಂದು ಪರಿಗಣಿಸಬೇಕು ಅಥವಾ ಪುರುಷ/ಮಹಿಳೆಯರ ನಡುವೆ ತಾರತಮ್ಯ ಮಾಡುವ ವ್ಯಭಿಚಾರ ನಿರ್ಬಂಧ ಕಾನೂನನ್ನು ರದ್ದುಗೊಳಿಸಬೇಕು' ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ವಿರೋಧ ವ್ಯಕ್ತಪಡಿಸಿ, ಈ ಅರ್ಜಿಯನ್ನು ವಜಾ ಮಾಡುವಂತೆ ನ್ಯಾಯಪೀಠಕ್ಕೆ ಕೇಳಿಕೊಂಡಿದೆ. ಹಾಗೇ ಒಂದು ವೇಳೆ ಈ ದಂಡ ಸಂಹಿತೆ ರದ್ದು ಮಾಡಿದರೆ ವಿವಾಹ ಪದ್ಧತಿಯ ಪಾವಿತ್ರ್ಯ ಮತ್ತು ನಂಬಿಕೆಗೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದವರನ್ನು ರಕ್ಷಿಸಿದ ವೈದ್ಯನಿಗೆ ಕಾದಿತ್ತು ಬಿಗ್ ಶಾಕ್

ಮಾಯ್ ಸಾಯ್ : ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಸಿಲುಕಿ ನರಳಾಡುತ್ತಿದ್ದ ಬಾಲಕರು ಸೇರಿದಂತೆ ಹದಿಮೂರು ಮಂದಿಗೆ ...

news

ವಿಧಾನಸಭೆ ಕಲಾಪ ಒಂದು ದಿನ ವಿಸ್ತರಣೆ

ಬೆಂಗಳೂರು: ಬಜೆಟ್ ಮೇಲೆ ಚರ್ಚೆ ಮಾಡಲು ರಾಜ್ಯ ವಿಧಾನಸಭೆ ಕಲಾಪ ಇನ್ನೂ ಒಂದು ದಿನ ವಿಸ್ತರಣೆಯಾಗಲಿದೆ. ...

news

2019 ರ ಲೋಕಸಭೆ ಚುನಾವಣೆ ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗುತ್ತೆ ಎಂದವರು ಯಾರು ಗೊತ್ತೇ?

ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗುತ್ತದೆ ...

news

ಬೆಳ್ಳಂಬೆಳಗ್ಗೆ ಎಸಿಬಿ ದಾಳಿ: ಅಧಿಕಾರಿಗಳಿಗೆ ಶಾಕ್

ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಎರಡು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಗ್ರಾಮೀಣ ನೀರು ...