ಗುಜರಾತ್ : ಜೀವ ಉಳಿಸುವ ವೈದ್ಯ ಭಗವಾನ್ ವಿಷ್ಣುವಿನ ಸ್ವರೂಪ ಎನ್ನುತ್ತಾರೆ. ಆದರೆ ಇಂತಹ ವೈದ್ಯನಿಂದಲ್ಲೇ ಮಹಿಳೆಯಬ್ಬಳ ಮೇಲೆ ಚಿಕಿತ್ಸೆಯ ನೆಪದಲ್ಲಿ ಅತ್ಯಾಚಾರ ನಡೆದಿರುವುದಾಗಿ ವರದಿಯಾಗಿದೆ. ಗುಜರಾತಿನ ಪ್ರಸಿದ್ಧ ಮೀ ಎಂಡ್ ಮಮ್ಮಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಂತಾನ ಪ್ರಾಪ್ತಿಗೆ ಪ್ರಸಿದ್ಧವಾಗಿದ್ದ ಈ ಆಸ್ಪತ್ರೆಗೆ ಮಕ್ಕಳಾಗದ ಮಹಿಳೆಯೊಬ್ಬಳು ಭೇಟಿ ನೀಡಿದ್ದಾಳೆ. ಅಲ್ಲಿ ಪ್ರಫುಲ್ ದೋಷಿ ಎಂಬ ವೈದ್ಯನಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಕಳೆದ ಆರು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿತ್ತು.